ಪ್ಯಾರಾಶೂಟ್ -
      ------ಮೂಲದ ಜತ	 ಹೋಲಿಸಿ 

ಬೀಳುತ್ತಿದ್ದಂತೆ ಬಿಡಿಸಿಕೊಳ್ಳುವ ಮೇಲ್ಮೈ ಸಲೆ ಗರಿಷ್ಠವಾಗಿದ್ದು ವಾಯುವಿಗೆ ಅಧಿಕ ರೋಧ ಒಡ್ಡಿ ಲಗತ್ತು ವಸ್ತುವಿನ ಪತನವೇಗವನ್ನು ಕಡಿಮೆ ಮಾಡುವ, ಸಾಧಾರಣ ಹಗುರ ವಸ್ತ್ರದಿಂದ ತಯಾರಿಸಲ್ಪಟ್ಟು ತೂಕ ಕನಿಷ್ಠ ಮಿತಿಯಲ್ಲಿರುವ ಮತ್ತು ಉಪಯೋಗವಿಲ್ಲದಾಗ ಕೊಡೆಯಂತೆ ಮಡಿಸಲು ಸಾಧ್ಯವಾಗುವ ಸಾಧನ. ಹಾರಾಡುತ್ತಿರುವ ವಿಮಾನದಿಂದ ನಿಶ್ಚಿತ ಸ್ಥಳಕ್ಕೆ ದುಮುಕಲೆಳಸುವ ಯೋಧನ ಜೀವರಕ್ಷಕ ಒಡನಾಡಿ ಇದು. ನೈಸರ್ಗಿಕ ಪ್ರಕೋಪಗಳಿಗೀಡಾಗಿ ದುರ್ಗಮ ನೆಲೆಗಳಲ್ಲಿ ಕೈದಾಗಿರುವ ನಿರಾಶ್ರಿತರಿಗೆ ಆಹಾರ, ಔಷಧಿ ಮುಂತಾದ ಜೀವಪೋಷಕಗಳನ್ನು ಒದಗಿಸುವ ದೂತ.
ಪ್ಯಾರಾಶೂಟಿನ ಕ್ರಿಯಾಸೂತ್ರವನ್ನು ಮೊದಲು ರೂಪಿಸಿದಾತ ಲಿಯೊನಾರ್ಡೊ ಡವಿಂಚಿ (1452-1519) ಮುಂದೆ ಒಂದನೆಯ ಮಹಾಯುದ್ಧಾರಂಭ ಕಾಲದಲ್ಲಿ (1914) ಇದು ಜೀವರಕ್ಷಕ ಸಾಧನವಾಗಿ ಬಳಸಲ್ಪಟ್ಟಿತು. ಆದರೆ, ಅತಿ ಶೀಘ್ರದಲ್ಲೇ ಯುದ್ಧಾಚರಣೆಯಲ್ಲಿ ಪ್ರಮುಖ ವಾಹನವಾಗಿ ಇದರ ಮಹತ್ವ ಸ್ಥಿರವಾಯಿತು. 

ತಾತ್ತ್ವಿಕವಾಗಿ ಪ್ಯಾರಾಶೂಟ್ ಉಬ್ಬಿದ ಒಂದು ದೊಡ್ಡ ಪೊರೆ. ಇದು ತೆರೆದುಕೊಂಡಂತೆ ಇದರೊಳಗೆ ಸೆರೆಯಾಗುವ ವಾಯುಭಾರಕ್ಕೂ ಹೊರಗೆ ಮುಕ್ತ ಪರಿಚಲನೆಯಲ್ಲಿರುವ ವಾಯುಸಂಮರ್ದಕ್ಕೂ ನಡುವೆ ಮೇಲ್ಮೊಗ ನೂಕುಬಲವೇರ್ಪಟ್ಟು ಪ್ಯಾರಾಶೂಟ್ ಗುರುತ್ವಬಲವನ್ನು ವಿರೋಧಿಸುತ್ತಲೇ ಅತಿ ಮಂದಗತಿಯಿಂದ ಕೆಳಸರಿಯತೊಡಗುತ್ತದೆ. ಅಂದ ಮೇಲೆ ಇದನ್ನು ಹಗುರ ಆದರೆ ಬಲಿಷ್ಠ ಪದಾರ್ಥದಿಂದ ತಯಾರಿಸಬೇಕೆಂಬುದು ಸ್ಪಷ್ಟ. ಇದಕ್ಕೆ ಬಳಸುವ ಪದಾರ್ಥ ನಾರು. ಕರ್ಷಣವನ್ನೆದುರಿಸಲು (ಟೆನ್ಷನ್) ನಾರಿಗಿರುವ ದೃಢತೆ ಸರಿಸಾಟಿ ಇಲ್ಲದ್ದು. ಪ್ಯಾರಾಶೂಟಿನ ಇಳಿತಕ್ಕೆ ಸಂಬಂಧಿಸಿದಂತೆ ಇರುವ ಗಣತೀಯ ಸಮೀಕರಣ ಹೀಗಿದೆ. 

ʊ2.ಈ
ಇಲ್ಲಿ W = ಕರ್ಷಣ, ಗಿ = ಇಳಿತದ ವೇಗ, ಈ = ಪ್ಯಾರಾಶೂಟಿನ ಪ್ರಕ್ಷೇಪಿತ ವಲಯದ ಪರಿಮಾಣ ಙ = ವಾಯುವಿನ ಸಾಪೇಕ್ಷ ಸಾಂದ್ರತೆ, ಮತ್ತು g = ಗುರುತ್ತ್ವ ವೇಗೊತ್ಕರ್ಷ ಪೊರೆ ತೆರೆದುಕೊಂಡಿರುವ ಪ್ಯಾರಾಶೂಟ್ ನೆಲದತ್ತ ಸರಿಯುವಾಗ ಸಮತೋಲಸ್ಥಿತಿ ಏರ್ಪಟ್ಟು ಬೀಳುತ್ತಿರುವ ಪ್ಯಾರಾಶೂಟಿನ ಮೇಲೆ ವರ್ತಿಸುವ ಕರ್ಷಣ ಮತ್ತು ನೆಗಪುಗಳ ಸಲುವಾಗಿ ಫಲಿತಬಲ ಪ್ಯಾರಾಶೂಟಿನ ತೂಕಕ್ಕೆ ಸಮವಾಗುತ್ತದೆ.									
	     (ಎ.ಸಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ